ವರ್ನರ್, ಆಲ್‍ಫ್ರೆಡ್
	1866-1919. ಜರ್ಮನಿಸಂಜಾತ ಸ್ವಿಸ್ ರಸಾಯನವಿe್ಞÁನಿ. ಸಹಯೋಜಕ ಸಂಯುಕ್ತಗಳ (ಕಾರ್ಡಿನೇಶನ್ ಕಾಂಪೌಂಡ್ಸ್)  ಬಗ್ಗೆ  ಸಂಶೋಧನೆ  ಮಾಡಿದ. ಬಾಲ್ಯ ವಿದ್ಯಾಭ್ಯಾಸ ಜರ್ಮನಿಯಲ್ಲಿ. ಇಪ್ಪತ್ತರ  ಹರೆಯದಲ್ಲಿ ಒಂದು ವರ್ಷ ಸೇನೆಯಲ್ಲಿ ಸೇವೆ. ಅನಂತರ ಸ್ವಿಟ್ಜರ್ಲೆಂಡಿಗೆ ವಲಸೆ. ಸ್ವಿಸ್ ನಾಗರಿಕನಾಗಿ ಕೊನೆಯತನಕ ಅಲ್ಲೆ  ವಾಸ್ತವ್ಯ. ಜರ್ಮನಿಯಲ್ಲಿದ್ದಾಗಲೇ ಮನೆಯಲ್ಲಿ ಒಂದು ಪುಟ್ಟ ಪ್ರಯೋಗ ಶಾಲೆ ಸ್ಥಾಪಿಸಿಕೊಂಡು ಸಾಕಷ್ಟು ಮೂಲಭೂತ  ಸಂಶೋಧನೆಗಳಲ್ಲಿ ತೊಡಗಿದ್ದ. ಮುಂದೆ ಜ್ಯೂರಿಚ್ ವಿಶ್ವವಿದ್ಯಾಲಯದಿಂದ ಪಿಎಚ್.ಡಿ.  ಪದವಿ ಗಳಿಸಲು ಈ ಅನುಭವ ನೆರವಾಯಿತು. ಇವನ ಮುಂದಿನ ಸಂಶೋಧನೆ ಬರ್ತೆಲೋ (1827-1907) ಎಂಬಾತನ ಸಾಹಚರ್ಯೆಯಲ್ಲಿ (ಪ್ಯಾರಿಸ್) ನಡೆಯಿತು. ನೈಟ್ರೊಜನ್ ಪರಮಾಣು ಕೇಂದ್ರವಾಗಿರುವ ಸಂಯುಕ್ತಗಳಲ್ಲಿ ಅದರ ಸುತ್ತ ಇತರ ಪರಮಾಣುಗಳ ವಿನ್ಯಾಸ ಅಂತರಾಳದಲ್ಲಿ ಹೇಗಿರುತ್ತದೆ ಎಂಬುದು ಇವನ ಪಿಎಚ್.ಡಿ. ಮಹಾಪ್ರಬಂಧದ ವಿಷಯ. ಸಹವೇಲೆನ್ಸಿಯ ಬಂಧಕ್ಕೆ ನಿಶ್ಚಿತ ದಿಶೆಗ ಳುಂಟು. ಮೀಥೇನ್ ಅಣುವಿನಲ್ಲಿರುವ ಕಾರ್ಬನ್ ಪರಮಾಣು ಒಂದು ಕ್ರಮಚತುರ್ಮುಖಿಯ ಕೇಂದ್ರದಲ್ಲಿದೆ. ನಾಲ್ಕು ಹೈಡ್ರೊಜನ್ ಪರಮಾಣು ಗಳೂ ಚತುರ್ಮುಖಿಯ ನಾಲ್ಕು ಮೂಲೆಗಳಲ್ಲಿವೆ. ಪ್ರತಿಯೊಂದು ಊ-ಅ-ಊ  ಕೋನವೂ 1090 28. ಈ ದಿಶೀಯತೆಯ ಪರಿಣಾಮವಾಗಿ ಸಹವೇಲೆನ್ಸಿಯ ಸಂಯುಕ್ತಗಳಲ್ಲಿ ಮೂರು ಆಯಾಮದ ರಚನೆಗೆ ಅವಕಾಶವಿದೆ. ಈ ಸಿದ್ಧಾಂತವನ್ನು ಆಧರಿಸಿ ಕ್ರೋಮಿಯಮ್ ಕೋಬಾಲ್ಟ್ ಮತ್ತು ರೋಡಿಯಮ್‍ಗಳ ದ್ಯುತಿಪಟು ಸಂಯುಕ್ತಗಳನ್ನು ಪತ್ತೆ ಹಚ್ಚಿದ. 1891ರಲ್ಲಿ ಇವನು ಪ್ರತಿಪಾದಿಸಿದ ಸಹಯೋಜಕ ಸಂಯುಕ್ತಗಳ ಸಿದ್ಧಾಂತದಿಂದ ಪ್ರಪಂಚಪ್ರಸಿದ್ಧನಾದ. ನೊಬೆಲ್ ಪ್ರಶಸ್ತಿ ಬಂದಿತು(1913). ಸಿದ್ಧಾಂತದ ರೂಪರೇಷೆಗಳು ಕನಸಿನಲ್ಲಿ ಮೂಡಿದುವು ಎಂದು ಹೇಳಿಕೊಂಡಿದ್ದಾನೆ(ಕೆಕುಲೆಗೆ, 1829-96, ಬೆನ್ಸೀನ್‍ನ ಸಮಷಟ್ಕೋನಾ ಕೃತಿ ರಚನೆ ಕಂಡಂತೆ). ರಾತ್ರಿ 2 ಗಂಟೆಗೆ ಎಚ್ಚರವಾಗಿ ಮುಂಜಾನೆ 5 ಗಂಟೆಯ ಸುಮಾರಿಗೆ ವಿವರಗಳನ್ನು ಸಿದ್ಧಪಡಿಸಿದನಂತೆ. ಸಿದ್ಧಾಂತದ ಸಂಕ್ಷೇಪ ವರದಿ ಹೀಗಿದೆ. 

	ಲೋಹಗಳ ವೇಲೆನ್ಸಿಯಲ್ಲಿ ಎರಡು ಬಗೆ: ಪ್ರಾಥಮಿಕ ಅಥವಾ ಪ್ರಧಾನ ವೇಲೆನ್ಸಿ, ದ್ವೀತೀಯಕ ಅಥವಾ ಸಹಾಯಕ ವೇಲೆನ್ಸಿ. ಸಂಕೀರ್ಣ ಸಂಯುಕ್ತದ ಕೇಂದ್ರದಲ್ಲಿರುವ ಲೋಹದ ಪರಮಾಣು ತನ್ನ ಒಂದು ಅಥವಾ ಹೆಚ್ಚು ಎಲೆಕ್ಟ್ರಾನುಗಳನ್ನು ಬೇರೊಂದು ರ್ಯಾಡಿಕಲ್‍ಗೆ ದಾನಮಾಡಿ ಅದು ಋಣಾವಿಷ್ಟವಾಗುವಂತೆ ಮಾಡಿ ತಾನು ಧನಾವಿಷ್ಟವಾಗುವುದರ ಮೂಲಕ ತನ್ನ ಪ್ರಾಥಮಿಕ ವೇಲೆನ್ಸಿಯನ್ನು ತೃಪ್ತಿಪಡಿಸಿಕೊಳ್ಳುತ್ತದೆ. ಅದರ ಸಹಾಯಕ ವೇಲೆನ್ಸಿ ತೃಪ್ತಿಯಾಗುವುದು. ಋಣಾವಿಷ್ಟ ಸಯನೈಡ್ ನಂಥ ಅಯಾನ್‍ಗಳಿಂದ ಅಥವಾ ಅಮೋನಿಯದಂಥ (ಓಊ3) ತಟಸ್ಥ ಅಣುಗಳಿಂದ ಪ್ರತಿಯೊಂದು ಲೋಹಕ್ಕೂ ನಿಶ್ಚಿತ ಸಂಖ್ಯೆಯ ಸಹಾಯಕ ವೇಲೆನ್ಸಿಗಳುಂಟು. ಇದೇ ಸಂಕೀರ್ಣದ ಸಹಯೋಜಕ ಸಂಖ್ಯೆ. ಅನಾಗರಿಕ ವಾತಾವರಣದಲ್ಲಿ ಕೆಳಮಾಳಿಗೆಯ ಸಾಕಷ್ಟು ಗಾಳಿ ಬೆಳಕುಗಳಿಲ್ಲದ ಕೊಠಡಿಗಳಲ್ಲಿ ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನೆ ನಡೆಸಬೇಕಾಗಿದ್ದ ಈತ ನೊಬೆಲ್ ಪ್ರಶಸ್ತಿಗೆ ಪಾತ್ರನಾದುದು ಒಂದು ಮಹತ್ಸಾಧನೆಯೇ ಸರಿ.							
	(ಎಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ